ಚಿತ್ರ: ನಿನದೆ ನೆನಪು
ಸಾಹಿತ್ಯ: ಕವಿರಾಜ್
ಸಂಗೀತ: ಮಹೇಶ್ ಪಟೇಲ್, ರಾಮ್ ಸಂಪತ್
ಗಾಯನ: ಕುನಾಲ್ ಗಾಂಜವಾಲ

ಹೀಗೇಕೆ ನಂಗೆ ನೆನಪಾಗುವೆ?
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ
ಸುಡು ಸುಡುತಿದೆ ಎದೆಯೊಳಗೆ ನಿನದೆ ನೆನಪು
ಕಾಡಿಸುತಿದೆ ಪ್ರತಿ ಘಳಿಗೆ ನಿನದೆ ನೆನಪು.. ನನ್ನಾಣೆ..

ಅರೆ ಘಳಿಗೆ ಮರೆತಿರಲು ನಾನು ನಿನ್ನಾ
ಮರು ಘಳಿಗೆಯೆ ಮರಣ ಕಣೆ ನಂಗೆ ಚಿನ್ನಾ
ಇನ್ನು ದೂರಾಗದೆ .. ಎಂದು ಕೈ ಜಾರದೆ
ನನ್ನ ಸಂಗಾತಿ ನೀನಾಗು ಬಾ..

ಹೀಗೇಕೆ ನಂಗೆ ನೆನಪಾಗುವೆ?
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ .. ಚೆಲುವೆ..

ನೀನಿಲ್ಲದ ಕನಸುಗಳು ನನಗೆ ಬೇಡಾ..
ನಿನ್ನ ಕಾಣದೆ ನರಳುವುದು ನೆರಳೂ ಕೂಡಾ
ಮರೆತು ನಿನ್ನನ್ನು .. ಮರೆತು ಹೋಗೆನು..
ಇನ್ನು ಎಂದೆಂದು ನಿನ್ನೋನು ನಾ..

ಹೀಗೇಕೆ ನಂಗೆ ನೆನಪಾಗುವೆ?
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ
ಸುಡು ಸುಡುತಿದೆ ಎದೆಯೊಳಗೆ ನಿನದೆ ನೆನಪು
ಕಾಡಿಸುತಿದೆ ಪ್ರತಿ ಘಳಿಗೆ ನಿನದೆ ನೆನಪು.. ನನ್ನಾಣೆ..

Category: ಕನ್ನಡ ಚಿತ್ರಸಾಹಿತ್ಯ
Category: ನಿನದೆ ನೆನಪು ಚಿತ್ರ
Category: ಕವಿರಾಜ್ ಸಾಹಿತ್ಯ
Category:Kannada